ಕಣ್ಣಿನ ಆ ಗುಳಿ

ಅವಳು ಆಡಿದ ಮಾತುಗಳಿಗೆ
ನಕ್ಕು ನಲಿಯಲು ಅವನು,
ಆ ನಗು ನೋಡಿ ನಾಚಿ ಸೆಳಧು
ಬಿದ್ದಳು ಕಣ್ಣಿನ ಆ ಗುಳಿ ಒಳಗೆ.

ಕಣ್ಣಂಚಲಿ ಹನಿಯೊಂದು,
ನಗುತ್ತ ಸರಿದನು ಅವಳ ಕಡೆಗೆ,
ಆ ಕಣ್ಣಿನ ಆಕರ್ಷಣೆಯೋ,
ಅಲ್ಲ ಅವನ ನಗುವೋ
ಯಾವುದಕ್ಕೆ ಕರಗಿದಳೋ ಅವಳೆಂದೂ
ಕುತೂಹಲ ಹೆಚ್ಚಿತು ಅವಳಲಿ.

ಮೌನವಾಗಿ ಅವನ ಕಡೆಗೆ ತಲೆ ಚಾಚಿದಳು,
ಹೃದಯ ಮಿಡಿತದಲಿ ಸಿಡಿಲು ಕೂಗಿದಂತೆ,
ಇಬ್ಬರ ಕಣ್ಣಲ್ಲಿ ಮಾತಿಲ್ಲದ ನಗು ತೇಲಿತು!!

Leave a comment