ಸಾವಿರ ಕನಸುಗಳು!
ಸಾವಿರ ಪ್ರಶ್ನೆಗಳು!
ಉತ್ತರವ ಹುಡುಕಲೇ?
ಅಲ್ಲ ಆ ಉತ್ತರದ ಪ್ರಶ್ನೆಗೆ..
ಇನೊಂದು ಪ್ರಶ್ನೆ ಹಾಕಲೇ?
ಉತ್ತರ ಮುಂದೆಯೇ ಇದ್ದರೂ..
ಆ ಉತ್ತರದ ಒಳಗಿನ ಪ್ರಶ್ನೆಗಳು..
ನನ್ನ ಬದುಕಿನ ಕುತೂಹಲದ ಚುಕ್ಕಿ.
ಚುಕ್ಕಿಯ ಬಿಡಿಸಲು ಸಾವಿರಾರು ಜನರು..
ಆದ್ರೆ ಬಾಳೆಂಬ ಚುಕ್ಕಿಯ ಚುಕ್ಕಿಯಂತೆ ಇಡಲು..
ಒಂದೊಂದೇ ಚುಕ್ಕಿಯ ಬಿಡಿಸುತ ಬಾಳುವ ಕನಸು!
ಸಾವಿರ ಕನಸುಗಳಲ್ಲಿ ಒಂದು ಚಿಕ್ಕ ಚುಕ್ಕಿಯ ಕನಸು!
ಸಾವಿರ ಪ್ರಶ್ನೆಗೆ ಒಂದೇ ಉತ್ತರ!
ಸಾವಿರ ಕನಸುಗಳಿಗೆ ಒಂದೇ ದಿಕ್ಕು!
ನೀ ಹುಡುಕುವೆಯಾ ಆ ಒಂದು ಪಯಣಿಗನ..
ಒಂದೇ ಉತ್ತರ ಒಂದೇ ದಿಕ್ಕಿಗೆ ಸೆಳೆಯಲು ಅವನು!
ಬಾಳೊಂದು ಕುತೂಹಲದ ಚುಕ್ಕಿಗೆ..
ಇನ್ನೆರಡು ಚುಕ್ಕಿ ಸೇರಿಸುತ್ತ ಅವನ ಜೊತೆಯೇ…
ಪಯಣ ಮುಂದುವರೆಯಲು ದೂರದ ನಿಲ್ದಾಣಕೆ!

Leave a comment