
ಮುಂಗುರುಳ ಸರಿಸುತ್ತ
ನಿಂತಿರುವ ಚೆಲುವೇ
ಕನ್ನಡಿಯ ಬಿಂಬ ನೋಡಿ
ನಗುತಿರಲು ಸುಮ್ಮನೇ
ಕೇಳದಿರು ಕಾರಣವಾ
ಕೇಳಿದರೆ ನಾಚಿ ಇವಳು
ಕನ್ನಡಿಯ ಬಿಂಬ ದಿಂದ
ಹೊರ ಬರುವಳು ಕುಣಿಯುತ್ತ
ದೂರದಲಿ ನೋಡಿದ ಚೆಲುವ ಇವಳನ್ನು
ಆ ಬಿಂಬ ದೊಂದಿಗೆ ಜೊತೆ ಸೇರಲು ಆಸೆ
ಮನ ಓಡಿತು ಅವಳ ಹತ್ತಿರ
ಹೇಳಲು ಬಯಸುವನು ಸಾವಿರ ಸಾಲುಗಳು
ಕಣ್ಣಲೇ ಹೇಳಿದನು ತುಟಿಗಳು ಹೇಳಧಾ ಸಾಲುಗಳನು
Leave a comment