ನಿಲ್ಲದ ಮಳೆ ರಾಯ

,

ಮೋಡವೆ ಅತ್ತು ಸುಸ್ತಾಗಿಲ್ವೇ ನಿನಗೆ

ಕಣ್ಣೀರ್ ಧಾರೆ ಹರಿದು

ಸಾಕಾಗಿಲ್ಲವೇ ನಿನಗೆ

ಒಂದಿಷ್ಟು ನಕ್ಕುಬಿಡು


ಇದು ಕೇಳಿದ ಒಡನೆ

ಇನ್ನು ಯಾಕೆ ಜೋರಾಗಿ ಅಳುತಿರುವೆ

ನನಗಿದೆ ನಡೆಯಲು ಆಸೆ ಹೊರಗೆ

ಅತ್ತು ಬಿಡಲೇ ನಿನ್ನ ಜೊತೆ

ಅಲ್ಲ ನಗಿಸಲೇ ಒಂದಷ್ಟು ಹೊತ್ತು ನಿನ್ನ


ಓಹೋ ಮೊಡವೆ ಮತ್ತೆ ಮತ್ತೆ ಏಕೆ ಅಳುವೇ

ಒಮ್ಮೆಯೇ ಅತ್ತುಬಿಡು ಜೊತೆಗೆ ನಾನು ಸೇರುವೆ

ಬಿಗಿದಪ್ಪುವೆ ನಿನ್ನ ಕಣ್ಣೀರು ಆರುವ ತನಕ

ಮರೆತು ಬಿಡು ಒಳಗಿರುವ ಸಂತಾಪ ದುಃಖ ಎಲ್ಲ

Leave a comment