ನಗುವುದೋ ಅಳುವುದೋ ತಿಳಿಯೆನಾ
ಒಂದು ಸಣ್ಣ ಮುಗುಳ ನಗೆ
ಒಂದು ಸಣ್ಣ ಹೊಳಪು ಕಣ್ಣು ರೆಪ್ಪೆಯಲ್ಲಿ
ಅರಿಯದೆ ನಗುತ್ತಿಹೆನು ವಿನಾ ಕಾರಣಕೆ
ದಿನ ಅರಳಿತು ಆ ಮುಗುಳ ನಗೆಯಲಿ
ಮಾಸಿತು ಆ ನಗು ಒಂದಿಷ್ಟು ಸಮಯ
ಬಂದಿತು ಮತ್ತೆ ಅರಿಯದೆ
ತಟ್ಟಿತು ಮನದ ಬಾಗಿಲು
ಒಂದು ಸಣ್ಣ ಮುಗುಳ ನಗೆ
ಮೂಡಿಸಿತು ಈ ಸಾಲುಗಳನ್ನು
ಈ ನಗು ಉಳಿಯಲಿ ಹೀಗೆ ಸದಾ
ಬಯಸುತ್ತಾ ಮಲಗುವೇನೋ ಇಂದು ಪುನಃ
ನಗುವುದೋ ಅಳುವುದೋ ತಿಳಿಯೆನಾ…
ಅರಳಿದ ಹೂವು ಬಾಡುತ್ತೆ ಒಂದು ದಿನ
ನೀನು ಮಾತ್ರ ಬಾಡದಿರು ಎಂದು
ಬಾಡಿದರೂ ಇರಲಿ ಹೊಳಪು ಮುಖದಲ್ಲಿ ಸದಾ
ಇನ್ನೊಂದು ಹೂವು ಅರಳುವದೇ ಒಳಗೆ
ಕಾಯಲು ಮನ ಆ ಹೂವಿಗಾಗಿ
ನಗುವುದೋ ಅಳುವುದೋ ತಿಳಿಯೆನಾ…

Leave a comment